ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರ.
ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು:-
ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ದಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ರೂ.1.00 ಲಕ್ಷದ ಘಟಕ ವೆಚ್ಚಕ್ಕೆ ಗರಿಷ್ಠ ರೂ.80,000/-ಗಳ ವರೆಗೆ ಸಾಲ ವಾರ್ಷಿಕ ಶೇ.4%ರ ಬಡ್ಡಿದರದಲ್ಲಿ ಹಾಗೂ ಗರಿಷ್ಠ ರೂ. 20,000/-ಗಳ ಸಹಾಯಧನವನ್ನು ಮಂಜೂರು ಮಾಡಲಾಗುವುದು. ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳ ವಿರಾಮಾವಧಿ ಇರುತ್ತದೆ. (ಪಂಚವೃತ್ತಿಗಳೆಂದರೆ, 1) ಚಿನ್ನ ಬೆಳ್ಳಿ ಕೆಲಸ 2) ಶಿಲ್ಪಕಲೆ 3) ಲೋಹದ ಕೆಲಸ 4)ಮರಗೆಲಸ ಮತ್ತು 5) ಎರಕ ಕೆಲಸ ಎಂದು ಪರಿಭಾವಿಸಲಾಗಿದೆ).
ಸ್ವಯಂ ಉದ್ಯೋಗ ನೇರಸಾಲ ಯೋಜನೆ:-
ವಿಶ್ವಕರ್ಮ ಸಮುದಾಯಗಳಿಗೆ ಸೇರಿದವರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ರೂ.40,000/- ಸಾಲ ಮತ್ತು ಶೇ.30ರಷ್ಟು ಅಥವಾ ಗರಿಷ್ಠ ರೂ.10,000/-ಗಳ ಸಹಾಯಧನ (ಸಬ್ಸಿಡಿ) ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.
ಬ್ಯಾಂಕ್ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ:-
ವಿಶ್ವಕರ್ಮ ಸಮುದಾಯಗಳಿಗೆ ಸೇರಿದವರು ಕೈಗೊಳ್ಳುವ ವ್ಯಾಪಾರ, ಕೈಗಾರಿಕೆ, ಸೇವಾ ಉದ್ದಿಮೆ ಹಾಗೂ ಕೃಷಿ ಅವಲಂಭಿತ ಚಟುವಟಿಕೆಗಳಿಗೆ ಬ್ಯಾಂಕ್ಗಳ ಮೂಲಕ ಗರಿಷ್ಠ ರೂ.5.00ಲಕ್ಷ ಗಳ ಸಾಲವನ್ನು ಒದಗಿಸಲಾಗುವುದು. ಘಟಕ ವೆಚ್ಚ ರೂ.1.00ಲಕ್ಷಗಳ ವರೆಗೆ ಶೇ.30ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣವನ್ನು ಮತ್ತು ಘಟಕ ವೆಚ್ಚ ರೂ.1.00 ಲಕ್ಷಗಳಿಂದ ರೂ.5.00ಲಕ್ಷಗಳವರೆಗೆ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1.00ಲಕ್ಷಗಳ ಮಾರ್ಜಿನ್ ಹಣವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
ಅರಿವು-ಶೈಕ್ಷಣಿಕ ಸಾಲ ಯೋಜನೆ:
ಈ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಉನ್ನತ ಕೋರ್ಸ್ಗಳಲ್ಲಿ ಸಿಇಟಿ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ವಾರ್ಷಿಕ ಗರಿಷ್ಠ ರೂ.1,00,000/-ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50ಲಕ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಪಡೆದ ಸಾಲವು ವಿದ್ಯಾರ್ಥಿಯ ವ್ಯಾಸಂಗ ಪೂರ್ಣಗೊಂಡ 4ನೇ ತಿಂಗಳಿನಿಂದ ಮರುಪಾವತಿ ಪ್ರಾರಂಭವಾಗುವುದು. ಮರುಪಾವತಿ ಅವಧಿ 3 ವರ್ಷಗಳು, ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು.
ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ:-
ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಘಟಕ ವೆಚ್ಚವು 2.00 ಲಕ್ಷರೂ.ಗಳಾಗಿರುತ್ತದೆ. ಇದರಲ್ಲಿ ರೂ.1.50 ಲಕ್ಷಗಳ ಸಹಾಯಧನ ಹಾಗೂ ಸಾಲದ ಮೊತ್ತ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗಿರುತ್ತದೆ. ಸಾಲದ ಮರುಪಾವತಿ ಅವಧಿಯು 3 ವರ್ಷಗಳು. ಪ್ರತಿ ಕೊಳವೆ ಬಾವಿಗೆ ಸರಾಸರಿಯಾಗಿ ರೂ.50,000ಗಳನ್ನು ನಿಗಮದಿಂದ ವಿದ್ಯುದ್ದೀಕರಣ ವೆಚ್ಚಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪವಾತಿಸಲಾಗುವುದು.
ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆ :-
ಈ ಯೋಜನೆಯಲ್ಲಿ ಮಹಿಳೆಯರು ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡುವುದು. ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಚಟುವಟಿಕೆಗಳಾದ ಹಣ್ಣು, ತರಕಾರಿ ವ್ಯಾಪಾರ, ಹಾಲು ವ್ಯಾಪಾರ, ಹೂ ವ್ಯಾಪಾರ, ಮೀನು ವ್ಯಾಪಾರ, ಟೀ/ಕಾಫಿ ಸ್ಟಾಲ್, ಸಣ್ಣ ವ್ಯಾಪಾರ ಇತ್ಯಾದಿ ವ್ಯಾಪಾರದ ಚಟುವಟಿಕೆಗಳಿಗೆ ಗರಿಷ್ಟ ರೂ.15,000/-ಗಳಿಗೆ ರೂ.10,000/-ಗಳು ಸಾಲ ಶೇ.4ರ ಬಡ್ಡಿದರದಲ್ಲಿ ಹಾಗೂ ಗರಿಷ್ಠ ರೂ.5,000/-ಗಳ ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.
ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆ:
ಈ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ವೃತ್ತಿಗಳಾದ ಕಮ್ಮಾರಿಕೆ, ಅಕ್ಕಸಾಲಿ ಹಾಗೂ ಬಡಗಿ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ 2017-18ನೇ ಸಾಲಿನಲ್ಲಿ ರಾಜ್ಯಾದ್ಯಂತ ಒಟ್ಟು 100 ಫಲಾಪೇಕ್ಷಿಗಳಿಗೆ ರೂ.1,50,000/-ಗಳಂತೆ ಘಟಕ ವೆಚ್ಚ ಮಂಜೂರು ಮಾಡಲಾಗುವುದು. ಇದರಲ್ಲಿ ಶೇ.20 ರಷ್ಟು ಗರಿಷ್ಟ ರೂ.25,000/-ಗಳ ಸಹಾಯಧನ ಮಂಜೂರು ಮಾಡಲಾಗುವುದು. ಈ ಯೋಜನೆ ಅಡಿಯಲ್ಲಿ ಶೇ.80 ರಷ್ಟು ಸಾಲದ ಮೊತ್ತಕ್ಕೆ ಶೇ.4 ಬಡ್ಡಿದರ ವಿಧಿಸಿಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.
ಸಾಲ ಪಡೆಯಲು ಬೇಕಾಗಿರುವ ಸಾಮಾನ್ಯ ಅರ್ಹತೆಗಳು:
- ಅರ್ಜಿದಾರರು ಸರ್ಕಾರದ ಆದೇಶ ಸಂಖ್ಯೆ: ಎಸ್.ಡಬ್ಲ್ಯೂ.ಡಿ. 228 ಬಿಸಿಎ 2000, ದಿನಾಂಕ: 30/03/2002ರನ್ವಯ ಹಿಂದುಳಿದ ವರ್ಗಗಳ ಪ್ರವರ್ಗ 2ಎ ನಲ್ಲಿ ಬರುವ ವಿಶ್ವಕರ್ಮ ಸಮುದಾಯಗಳಿಗೆ ಸೇರಿರಬೇಕು.
- ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನವೂ ಗ್ರಾಮಾಂತರ ಪ್ರದೇಶದವರಿಗೆ ರೂ.40,000/- ಹಾಗೂ ನಗರ ಪ್ರದೇಶದವರಿಗೆ ರೂ.55,000/-ಗಳ ಮಿತಿಯೊಳಗಿರಬೇಕು.
- ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು.
- ಪಂಚವೃತ್ತಿ ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಪಂಚವೃತ್ತಿಗಳಲ್ಲಿ ಒಂದು ವೃತ್ತಿಯನ್ನು ನಿರ್ವಹಿಸುತ್ತಿರಬೇಕು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳು.
- ಅವಧಿ ಸಾಲ ಯೋಜನೆ
- ನ್ಯೂ ಸ್ವರ್ಣಿಮಾ ಯೋಜನೆ
- ಶೈಕ್ಷಣಿಕ ಸಾಲ ಯೋಜನೆ
- ಸ್ವಯಂ ಸಕ್ಷಮ ಸಾಲ ಯೋಜನೆ
- ಮೈಕ್ರೋ ಫೈನಾನ್ಸ್ಯೋಜನೆ
- ಕೃಷಿ ಸಂಪದ
- ಶಿಲ್ಪ ಸಂಪದ
- ಮಹಿಳಾ ಸಮೃಧ್ಧಿ ಯೋಜನೆ