ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರ.

ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು:-

ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ದಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ರೂ.1.00 ಲಕ್ಷದ ಘಟಕ ವೆಚ್ಚಕ್ಕೆ ಗರಿಷ್ಠ ರೂ.80,000/-ಗಳ ವರೆಗೆ ಸಾಲ ವಾರ್ಷಿಕ ಶೇ.4%ರ ಬಡ್ಡಿದರದಲ್ಲಿ ಹಾಗೂ ಗರಿಷ್ಠ ರೂ. 20,000/-ಗಳ ಸಹಾಯಧನವನ್ನು ಮಂಜೂರು ಮಾಡಲಾಗುವುದು. ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳ ವಿರಾಮಾವಧಿ ಇರುತ್ತದೆ. (ಪಂಚವೃತ್ತಿಗಳೆಂದರೆ, 1) ಚಿನ್ನ ಬೆಳ್ಳಿ ಕೆಲಸ 2) ಶಿಲ್ಪಕಲೆ 3) ಲೋಹದ ಕೆಲಸ 4)ಮರಗೆಲಸ ಮತ್ತು 5) ಎರಕ ಕೆಲಸ ಎಂದು ಪರಿಭಾವಿಸಲಾಗಿದೆ).

Continue reading “ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ”